ಕರ್ನಾಟಕ ರಾಜ್ಯ ವಾರ್ತೆ

Sandalwood News: Kannada Cinema, Film, Movie Reviews News | Vijaya Karnataka Sandalwood News: Get latest kannada news paper cinema news updates, kannada cine industry breaking news, sandalwood celebrities gossip news in kannada on Vijaya Karnataka

 • ರಜನಿಕಾಂತ್‌ ರಾಜಕೀಯ ಪ್ರವೇಶ ಖಚಿತ! ಪಕ್ಷದ ಬಗ್ಗೆ ಮಹತ್ವದ ಮಾಹಿತಿ ನೀಡಿದ ‘ಸೂಪರ್‌ ಸ್ಟಾರ್‌’!
  on December 3, 2020 at 7:34 am

  ನಟ ರಜನಿಕಾಂತ್‌ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ನಿರ್ಧಾರ ಏನು ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದರಿಂದ ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆ ಬಗ್ಗೆ ಭಾರಿ ಕೌತುಕ ನಿರ್ಮಾಣ ಆಗಿದೆ.

 • ರಾಧಾ ಕೃಷ್ಣ ಧಾರಾವಾಹಿಯ ಕೃಷ್ಣನನ್ನು ಹುಡುಕಿ ದೆಹಲಿಗೆ ಹೊರಟ ಬೆಂಗಳೂರಿನ 8ನೇ ತರಗತಿ ವಿದ್ಯಾರ್ಥಿನಿ!
  on December 3, 2020 at 6:46 am

  ಕಲಾವಿದರು ಮಾಡುವ ಪಾತ್ರಗಳನ್ನು ಪಾತ್ರಗಳಾಗಿ ಸ್ವೀಕರಿಸದೆ ಕೆಲವರು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಅಂತೆಯೇ ರಾಧಾ ಕೃಷ್ಣ ಧಾರಾವಾಹಿಯನ್ನು ನೋಡಿ ಕೃಷ್ಣನನ್ನು ಅರಸಿ ಬೆಂಗಳೂರಿನ ಹುಡುಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾಳೆ.

 • ಮುಂಬೈನಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್ ಆಗುತ್ತಾ ಬಾಲಿವುಡ್‌? ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು?
  on December 3, 2020 at 6:15 am

  ಬಾಲಿವುಡ್‌ ಚಿತ್ರರಂಗವನ್ನು ಮುಂಬೈನಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಲಾಗುತ್ತದೆ ಎಂಬ ನ್ಯೂಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಗಾದರೆ, ಯುಪಿ ಸಿಎಂ ನಿಜಕ್ಕೂ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದಾರಾ? ಇಲ್ಲಿದೆ ಡಿಟೇಲ್ಸ್!

 • ಸಿನಿಮಾ ಆಸಕ್ತರಿಗೆ ಇಲ್ಲಿದೆ ಗುಡ್‌ ನ್ಯೂಸ್‌! ಚಿತ್ರೋತ್ಸವಗಳ ಆಯೋಜನೆಗೆ ನಡೆದಿದೆ ಭರ್ಜರಿ ತಯಾರಿ
  on December 3, 2020 at 6:10 am

  ಹರೀಶ್‌ ಬಸವರಾಜ್‌ಜಗತ್ತಿನಾದ್ಯಂತ ಹಬ್ಬಿದ ಕೊರೊನಾ ವೈರಸ್‌ ಭೀತಿಯಿಂದಾಗಿ ಲಾಕ್‌ಡೌನ್‌ ಜಾರಿ ಆದ ಪರಿಣಾಮ ಚಿತ್ರ ಪ್ರದರ್ಶನಗಳು ನಿಂತಿ ಹೋಗಿದ್ದವು. ಅಲ್ಲದೇ, ಜಗತ್ತಿನ ಹಲವು ದೇಶಗಳಲ್ಲಿ ಪ್ರತಿ ವರ್ಷ ನಡೆದುಕೊಂಡು ಬರುತ್ತಿದ್ದ ಚಿತ್ರೋತ್ಸವಗಳು ಸಹ ನಿಂತು ಹೋಗಿದ್ದವು. ಈಗ ನಿಧಾನವಾಗಿ ಪರಿಸ್ಥಿತಿ ಬದಲಾಗುತ್ತಿದೆ. ಮೊದಲಿನಂತೆ ಎಲ್ಲವೂ ಆರಂಭವಾಗುತ್ತಿದೆ. ಅದಕ್ಕೆ ಸಿನಿಮೋತ್ಸವಗಳು ಕೂಡ ಹೊರತಲ್ಲ. ಈ ವರ್ಷವೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸಲು ಸಿದ್ಧತೆ ಆರಂಭವಾಗಿದೆ. ಇದರೊಂದಿಗೆ ಸಿನಿಮಾ ಜಗತ್ತು ಕೊರೊನಾ ವೈರಸ್‌ ನಂತರ ಪೂರ್ಣವಾಗಿ ಚಟುವಟಿಕೆಗೆ ತೊಡಗಿದಂತಾಗುತ್ತದೆ.ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಮಾತ್ರವಲ್ಲದೆ ಭಾರತ ಸರ್ಕಾರ ಗೋವಾದಲ್ಲಿ ನಡೆಸುವ ಪನೋರಮಾ ಚಿತ್ರೋತ್ಸವದ ಕೆಲಸಗಳಿಗೂ ಈಗಾಗಲೇ ಚಾಲನೆ ನೀಡಲಾಗಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಪಾಸುಗಳ ವಿತರಣೆಗೆ ರಿಜಿಸ್ಪ್ರೇಷನ್‌ ಆರಂಭವಾಗಿದೆ. ಈ ಚಿತ್ರೋತ್ಸವದಲ್ಲಿ ಭಾರತದಲ್ಲಿರುವ ಎಲ್ಲ ಭಾಷೆಗಳ ಸಿನಿಮಾಗಳು ಪ್ರದರ್ಶನ ಆಗಲಿದೆ. ಇದರ ಜತೆಗೆ ಕೋಲ್ಕತ್ತಾ ಚಿತ್ರೋತ್ಸವ ಸಹ ಸದ್ಯದಲ್ಲೇ ಆರಂಭವಾಗಲಿದೆ. ಈ ಬೆಳವಣಿಗೆಗಳಿಂದ ಚಿತ್ರಪ್ರೇಮಿಗಳಿಗೆ ಖುಷಿ ಆಗಿದೆ. ನಿಧಾನವಾಗಿ ಮತ್ತೆ ಎಂದಿನ ಲಯಕ್ಕೆ ಚಿತ್ರೋದ್ಯಮ ಮರಳುತ್ತಿದೆ. ಮುಂದೆ ಓದಿ…

 • ‘ಲವ್‌ ಮಾಕ್‌ಟೇಲ್‌’ ಕೃಷ್ಣ ಜೊತೆಗೆ ‘ಶುಗರ್ ಫ್ಯಾಕ್ಟರಿ’ ಸೇರಿಕೊಂಡ ನಟಿ ಅದ್ವಿತಿ ಶೆಟ್ಟಿ!
  on December 3, 2020 at 5:31 am

  ಇತ್ತೀಚೆಗಷ್ಟೇ ‘ಐರಾವನ್‌’ ಸಿನಿಮಾದಲ್ಲಿ ನಟಿ ಅದ್ವಿತಿ ಶೆಟ್ಟಿ ನಾಯಕಿ ಎಂಬ ಸುದ್ದಿ ಹೊರಬಂದ ಬೆನ್ನಲ್ಲೇ ಈಗ ‘ಶುಗರ್‌ ಫ್ಯಾಕ್ಟರಿ’ ಸೇರಿದ್ದಾರೆ. ಈ ಚಿತ್ರದಲ್ಲಿ ‘ಲವ್ ಮಾಕ್‌ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣಗೆ ಅವರು ನಾಯಕಿ.

Karnataka District News | Karnataka Latest & Breaking News Karnataka District News in Kannada – Bangalore, Mysore, Belagavi, Mangalore, Shivamogga & more News in Kannada News Paper Vijaya Karnataka

ರಾಶಿ ಭವಿಷ್ಯ: Astrology in Kannada | Kannada Rashi Bhavishya – Vijaya Karnataka Astrology in Kannada: Read ರಾಶಿ ಭವಿಷ್ಯ/Dina rashi bhavishya in Kannada by birth date & time, horoscope in Kannada, Jataka in Kannada, Jataka matching & much more on Vijaya Karnataka

 • ಡಿಸೆಂಬರ್‌ 2020: ಈ ತಿಂಗಳಲ್ಲಿ ಯಾವ ರಾಶಿವರಿಗೆ ಯಾವ ಬಣ್ಣ ಅದೃಷ್ಟ ಗೊತ್ತಾ..?
  on December 3, 2020 at 7:42 am

  ನಾವೀಗ 2020 ರ ಕೊನೆಯ ತಿಂಗಳಾದ ಡಿಸೆಂಬರ್‌ ತಿಂಗಳಲ್ಲಿ ಇದ್ದೇವೆ. ಡಿಸೆಂಬರ್‌ ತಿಂಗಳಲ್ಲಿ 2020 ರ ಕಾರ್ತಿಕ ಮಾಡಸವು ಮುಕ್ತಾಯಗೊಂಡು ಮಾರ್ಗಶಿರ ಮಾಸವು ಅರಂಭವಾಗಲಿದೆ. ಅಷ್ಟು ಮಾತ್ರವಲ್ಲ, ಈ ಮಾಸದಲ್ಲಿ ಸಾಕಷ್ಟು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಈ ತಿಂಗಳಲ್ಲಿ ಅಂದರೆ ಡಿಸೆಂಬರ್‌ ತಿಂಗಳಲ್ಲಿ ನಿಮಗೆ ಶುಭವನ್ನು ತರುವ ಬಣ್ಣಗಳು ಯಾವುದು ಎಂದು ತಿಳಿಯೋಣ. ಡಿಸೆಂಬರ್ ತಿಂಗಳಲ್ಲಿ ಈ ಬಣ್ಣಗಳನ್ನು ಉಪಯೋಗಿಸಿದರೆ ನಿಮಗೆ ಶುಭವಾಗಲಿದೆ.

 • Nithya Bhavishya: ಮೇಷದವರಿಗಿಂದು ವಾಹನ ಅಪಘಾತವಾಗುವುದು..! ಎಚ್ಚರ ಅಗತ್ಯ
  on December 3, 2020 at 1:43 am

  ಇಂದು ಡಿಸೆಂಬರ್‌ 3, ಗುರುವಾರದ ಶುಭ ದಿನ. ಇಂದು, ಚಂದ್ರನು ಮಿಥುನ ರಾಶಿಯ ಮೂಲಕ ಹಗಲು ರಾತ್ರಿ ಸಾಗುತ್ತಾನೆ. ಚಂದ್ರನ ಈ ಸಾಗಣೆಯು ಶುಕ್ರದೊಂದಿಗೆ ನವಮಿ ಪಂಚಮಿ ಯೋಗವನ್ನು ರೂಪಿಸುತ್ತಿದೆ. ಈ ಪರಿಸ್ಥಿತಿಗಳಲ್ಲಿ, ಗ್ರಹಗಳ ಮೊತ್ತ ಕಾಕತಾಳೀಯವಾಗಿ, ಮಿಥುನ ರಾಶಿಯ ಜನರು ಅಪಾಯಕಾರಿ ಕೆಲಸವನ್ನು ತಪ್ಪಿಸಬೇಕು, ಗ್ರಹಗಳು ವೃಷಭ ರಾಶಿಯ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಇತರ ರಾಶಿಚಕ್ರಗಳಿಗೆ ನಕ್ಷತ್ರಗಳು ಇಂದು ಏನು ಹೇಳುತ್ತಿವೆ..? ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ..? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

 • ನಿಮ್ಮ ಜಾತಕದಲ್ಲಿ ಶುಕ್ರ ಎಲ್ಲಿದ್ದಾನೆ ಗೊತ್ತಾ..? ಈ ಸ್ಥಾನದಲ್ಲಿದ್ದರೆ ಶುಕ್ರದೆಸೆ..!
  on December 2, 2020 at 7:47 am

  ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಎಂದು ಹೇಳಲಾಗುತ್ತದೆ. ಶುಕ್ರನು ಸೌಕರ್ಯಗಳನ್ನು, ಕಲೆ, ಫ್ಯಾಷನ್, ವೈವಾಹಿಕ ಸಂತೋಷ, ಸಾಧನೆ, ಸೌಂದರ್ಯ ಮತ್ತು ಐಷಾರಾಮಿಗಳ ಜೀವನ ನೀಡುವ ಗ್ರಹವಾಗಿದ್ದಾನೆ. ಶುಕ್ರನು ಅಸುರರ ಗುರು. ಜೊತೆಗೆ 27 ನಕ್ಷತ್ರಗಳ ಪೈಕಿ ಪೂರ್ಣ ಫಾಲ್ಗುಣಿ, ಭರಣಿ ಮತ್ತು ಪೂರ್ವಾಶಾಢ ನಕ್ಷತ್ರಗಳನ್ನು ಆಳುತ್ತಾನೆ. ಜಾತಕದಲ್ಲಿ ಶುಕ್ರನು ಉನ್ನತ ಸ್ಥಾನದಲ್ಲಿದ್ದರೆ, ಸಂತೋಷ, ಸಮೃದ್ಧಿ, ಅಪೇಕ್ಷಿತ ಫಲ, ಗೌರವ ಮತ್ತು ಘನತೆ ಪ್ರಾಪ್ತಿಯಾಗುತ್ತದೆ ಮತ್ತು ಅವನು ಅಹಿತಕರ ಸ್ಥಾನದಲ್ಲಿದ್ದರೆ ಗಂಡ ಮತ್ತು ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು, ಸುಳ್ಳು ಆರೋಪಗಳು, ನ್ಯಾಯಾಲಯದ ವ್ಯಾಜ್ಯಗಳು ಮತ್ತು ನಿಮ್ಮ ಕೆಲಸದಲ್ಲಿ ಸಮಸ್ಯೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಎದುರಾಗುತ್ತವೆ. ಜಾತಕದ ಎಲ್ಲಾ 12 ಮನೆಗಳಲ್ಲಿ ಶುಕ್ರನು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತಾನೆ ಈ ಲೇಖನದಲ್ಲಿ ತಿಳಿಯೋಣ.

 • ಮಾಸಿಕ ಭವಿಷ್ಯ: ಅಬ್ಬಾ.. ಡಿಸೆಂಬರ್‌ನಲ್ಲಿ ಸಂಗಾತಿಯಿಂದ ದೂರಿರುವ ರಾಶಿಗಳಿವು..!
  on December 1, 2020 at 8:33 am

  ಜ್ಯೋತಿಷ್ಯದ ವಿಷಯದಲ್ಲಿ, ಈ ಇಡೀ ವರ್ಷವು ತುಂಬಾ ಪ್ರಕ್ಷುಬ್ಧವಾಗಿದೆ ಎಂಬುದು ತಿಳಿದಿರುವ ವಿಷಯ. ಇದೀಗ ನಾವು ವರ್ಷದ ಕೊನೆಯ ತಿಂಗಳು ಅಂದರೆ 2020 ರ ಡಿಸೆಂಬರ್ ತಿಂಗಳಿನಲ್ಲಿದ್ದೇವೆ. ಮಂಗಳ, ಬುಧ ಮತ್ತು ಶುಕ್ರ ಸೇರಿದಂತೆ 4 ಗ್ರಹಗಳ ಸ್ಥಾನವು ಡಿಸೆಂಬರ್ ತಿಂಗಳಲ್ಲಿ ಬದಲಾಗಲಿದೆ. ಕೆಲವು ರಾಶಿಚಕ್ರ ಚಿಹ್ನೆಗಳು ಇದರಿಂದ ಪ್ರಯೋಜನ ಪಡೆಯಬಹುದು, ಕೆಲವು ನಷ್ಟವನ್ನು ಸಹ ಎದುರಿಸಬೇಕಾಗುತ್ತದೆ. ಯಾವ ರಾಶಿ ಚಿಹ್ನೆಯವರಿಗೆ ಈ 2020 ಡಿಸೆಂಬರ್‌ ತಿಂಗಳು ಶುಭ ಮಾಸವಾಗಿದೆ..? ನಿಮ್ಮ ರಾಶಿಯ ಫಲಾಫಲ ಈ ಮಾಸದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

 • Vara Bhavishya: ಮೇಷ ರಾಶಿಯವರ ಖರ್ಚು ಹೆಚ್ಚಾಗುವುದು..! ರಾಶಿಚಕ್ರದ ಫಲಾಫಲವೇನು..?
  on November 30, 2020 at 8:23 am

  ಪ್ರಸ್ತುತ ವಾರವು ಕಾರ್ತಿಕ ಪೂರ್ಣಿಮಾದ ಶುಭ ಕಾಕತಾಳೀಯದೊಂದಿಗೆ ಪ್ರಾರಂಭವಾಗುತ್ತದೆ. ಈ ವಾರವು 2020 ರ ನವೆಂಬರ್‌ 30 ರಂದು ಸೋಮವಾರದಿಂದ ಆರಂಭವಾಗಿ 2020 ರ ಡಿಸೆಂಬರ್‌ 6 ರಂದು ಭಾನುವಾರ ಪೂರ್ಣಗೊಳ್ಳುವುದು. ಈ ವಾರ ಚಂದ್ರನು ಹೆಚ್ಚಿನ ರಾಶಿಚಕ್ರ ಚಿಹ್ನೆಯಲ್ಲಿ ಸಂಚಾರ ಮಾಡಲಿದ್ದಾನೆ. ಈ ವಾರ ವೃಶ್ಚಿಕ ರಾಶಿಯಲ್ಲಿ ಬುಧ ಸೂರ್ಯನೊಂದಿಗೆ ಇರುತ್ತಾನೆ. ಡಿಸೆಂಬರ್‌ ತಿಂಗಳ ಮೊದಲ ವಾರ ಹೇಗಿದೆ..? ಯಾವ ರಾಶಿಚಕ್ರ ಚಿಹ್ನೆಗಳು ಈ ವಾರ ಶುಭ ಫಲವನ್ನು ಪಡೆಯಲಿದೆ..? ಮತ್ತು ಯಾವ ರಾಶಿ ಚಿಹ್ನೆಯವರಿಗೆ ಅಶುಭ ಫಲವನ್ನು ಪಡೆಯಲಿದೆ..? ಎಂದು ನೋಡೋಣ.

RSS
Follow by Email