ಮಂಗಳೂರು, ಜೂನ್.12 : ಮಂಗಳೂರಿನ ಹೃದಯ ಭಾಗದಲ್ಲಿ ಇರುವ ನವಭಾರತ್ ಸರ್ಕಲ್ (ರಾಷ್ಟ್ರಕವಿ ಗೋವಿಂದ್ ಪೈ ವೃತ್ತ) ನ್ನು ಜೂನ್ 11ರ ಶುಕ್ರವಾರ ರಾತ್ರಿ ಏಕಾಏಕಿ ನೆಲಸಮ ಮಾಡಲಾಗಿದ್ದು ಇದೀಗ ಯೊಂದು ಪತ್ತೆಯಾಗಿದೆ. ದಶಕಗಳ ಹಿಂದೆ ಮಂಗಳೂರಿನ ಪ್ರಮುಖ ಪತ್ರಿಕೆಯಾಗಿದ್ದ ನವಭಾರತ ಮುದ್ರಣಾಲಯ ಮತ್ತು ಕಚೇರಿ ಇಲ್ಲಿ ಇದ್ದ ಕಾರಣಕ್ಕೆ ಈ ವೃತ್ತವನ್ನು ನವಭಾರತ ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಈ ವೃತ್ತವನ್ನು ಕೆಡವಲಾಗಿದೆ. ಶನಿವಾರ ಕಾಮಗಾರಿ ವೇಳೆ […]
ಸಾಮಥ್ಯ೯ ಇದ್ದವರು ಇಲ್ಲದವರಿಗೆ ಸಹಾಯ ಮಾಡಿ : ನಾಟಕ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್
ಮಂಗಳೂರು, ಜೂನ್.13 : ತುಳು ನಾಟಕ ಕಲಾವಿದರ ಒಕ್ಕೂಟ(ರಿ.) ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವೆರ್ ಕುವೈಟ್ ಇದರ ಸಂಯುಕ್ತ ಆಶ್ರಯದಲ್ಲಿ ನಾಟಕ ಕಲಾವಿದರಿಗೆ ಆಹಾರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಶನಿವಾರ ಕದ್ರಿಯ ಗೋಕುಲ್ ಸಭಾಭವನದಲ್ಲಿ ಜರುಗಿತು. ಈ ವೇಳೆ ಮಾತಾಡಿದ ಪೋಲಿಸ್ ಕಮಿಷನರ್ ಎನ್. ಶಶಿಕುಮಾರ್ ಅವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಎನ್ನುವಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಇಲ್ಲಿನ ಕಲಾಪೋಷಕರು ಕೂಡ ಕಲಾವಿದರ […]
ಜನತೆಯ ಸಂಕಷ್ಟ ಸಮಯದಲ್ಲಿ ಸ್ಪಂದಿಸುವ ಕೆಲಸವನ್ನು ಮಾಡುವುದು ಮಾನವ ಧರ್ಮ : ಮಾಜಿ ಸಚಿವ ಸೊರಕೆ
ಮಂಗಳೂರು : ಮಾನವೀತೆಯ ದೃಷ್ಟಿಯಲ್ಲಿ ಜನತೆಯ ಸಂಕಷ್ಟ ಸಮಯದಲ್ಲಿ ಸ್ಪಂದಿಸುವ ಕೆಲಸವನ್ನು ಮಾಡುವುದು ಮಾನವ ಧರ್ಮ, ಕೊರೂನಾ ಸೊಂಕಿತರ ಸೇವೆಗೆ ಕಾಂಗ್ರೆಸ್ ಕಾರ್ಯಕರ್ತರು ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೂರಕೆ ಸುಡಿದರು. ಅವರು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಕೊರೂನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಿಂದ ಬಳಲುತಿರುವ ಹೆಜಮಾಡಿ ಗ್ರಾಮದ ಬಡ ಕುಟುಂಬಗಳಿಗೆ ಸುಮಾರು 300 ಅಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ […]
ಕುಲಶೇಖರ ಹಾಗೂ ಕಂಟೋನ್ ಮೆಂಟ್ ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ.
ಮಂಗಳೂರು : ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆಕ್ಕೊಳಗಾದ ನಗರದ ಕಂಟೋನ್ ಮೆಂಟ್ ವಾರ್ಡ್ ವ್ಯಾಪ್ತಿಯಲ್ಲಿರುವ ಪಾಂಡೇಶ್ವರದ ಶಿವನಗರ, ಪೊಲೀಸ್ ಲೈನ್ ಮತ್ತು ಅತ್ತಾವರ ವೈದ್ಯನಾಥ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ದಿನ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬ್ಲಾಕ್ ಉಸ್ತುವಾರಿ ಹೊನ್ನಯ್ಯ, ವಾರ್ಡ್ ಅಧ್ಯಕ್ಷ ಸದಾಶಿವ ಕುಲಾಲ್,ಟಿ. ಕೆ. ಸುಧೀರ್, […]
ಸಂಕಷ್ಟದಲ್ಲಿರುವ ನಾಟಕ ಕಲಾವಿದರಿಗೆ ಲಯನ್ಸ್ ಕ್ಲಬ್‌ನಿಂದ ದಿನಸಿ ಕಿಟ್ ವಿತರಣೆ
ಮಂಗಳೂರು, ಜೂನ್.13 : ಕೋವಿಡ್ ಲಾಕ್‌ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನಾಟಕ ಕಲಾವಿದ ರಿಗೆ ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್ ಇವರ ವತಿಯಿಂದ ಆಹಾರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಶನಿವಾರ ಕದ್ರಿಯ ಗೋಕುಲ್ ಸಭಾಭವನದಲ್ಲಿ ಜರುಗಿತು. ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ನಡೆದ ಕಾರ್ಯಕ್ರಮದಲ್ಲಿ ನಾಟಕವನ್ನೆ ನಂಬಿ ಬದುಕುತ್ತಿದ್ದು, ಇದೀಗ ಹಲವಾರು ತಿಂಗಳ ಕಾಲ ಕೋವಿಡ್ ಲಾಕ್‌ಡೌನ್ ನಿಂದಾಗಿ ಯಾವೂದೇ ನಾಟಕಗಳಿಲ್ಲದೇ ಅರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 425 ಮಂದಿಗೆ ಆಹಾರ ದಿನಸಿ ಕಿಟ್ ಗಳನ್ನು […]
ಸೇವಾಂಜಲಿ ಆಶ್ರಯ ಹಸ್ತ ವತಿಯಿಂದ ಅರ್ಹ ಫಲಾನುಭವಿಗಳಿಗೆ 300 ಕಿಟ್ ಗಳ ವಿತರಣೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಅಗತ್ಯವಸ್ತುಗಳನ್ನು ಒಳಗೊಂಡ ಸೇವಾಂಜಲಿ-ಆಶ್ರಯಹಸ್ತ ಕಿಟ್ ಅನ್ನು ವಿತರಿಸಲಾಗುತ್ತಿದ್ದು ಸುಳ್ಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸುಮಾರು 300 ಕಿಟ್ ಗಳನ್ನು ವಿತರಿಸಲಾಯಿತು. ಸಮಾಜದ ಕಡುಬಡವರಿಗೆ ಸಹಾಯಹಸ್ತ ಚಾಚುವ ಸೇವೆಯನ್ನು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಮಾಡುತ್ತಾ ಬಂದಿರುವ ಸಮಾಜಸೇವಾ ಸಂಘಟನೆ ಆಶ್ರಯಹಸ್ತ ಟ್ರಸ್ಟ್ ಕೋವಿಡ್ ಲಾಕ್ ಡೌನ್ ನ ಅವಧಿಯಲ್ಲಿ ಬದುಕು ಸಾಗಿಸಲು ಹರಸಾಹಸ ಪಡುತ್ತಿರುವ ಕುಟುಂಬಗಳ ಸಹಾಯಕ್ಕೆ ಮುಂದೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತ್ಯೋದಯ […]
ಸಂತ ಆಂತೋನಿ ಆಶ್ರಮ ಜೆಪ್ಪು : ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ
ಮಹಾಮಾರಿ ‘ಕೋವಿಡ್ 19’ ನಿಯಂತ್ರಿಸಲು ಎಲ್ಲರೂ ಎಲ್ಲರೊಡನೆ ಕೈ ಜೋಡಿಸುವ : ಬಿಶಪ್ ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನರವರು ಸಂತ ಆಂತೋನಿಯವರ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಸಂಭ್ರಮದ ಬಲಿಪೂಜೆ ಅರ್ಪಿಸಿದರು. ಬಿಶಪರು ತಮ್ಮ ಪ್ರವಚನದಲ್ಲಿ, ಸಂತ ಆಂತೋನಿಯವರು ಮೂವತ್ತಾರು ವರ್ಷದ ತಮ್ಮ ಅಲ್ಪ ಅವಧಿಯ ಜೀವನದಲ್ಲಿ ದೇವರ ರಾಜ್ಯಕ್ಕಾಗಿ ನಿರಂತರ ದುಡಿದರು. ಹಸಿವು, ಬಾಯಾರಿಕೆ ಮತ್ತು ದಣಿವೆನ್ನದೆ ಮೈಲುಗಟ್ಟಲೆ ಕಾಲ್ದಾರಿಯಲ್ಲಿ ನಡೆದು […]
ಲಾಕ್ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಶ್ರೀ ಕರಣ್ ಜ್ಯೋತಿಷಿಯವರಿಂದ ಅಹಾರ ಕಿಟ್ ವಿತರಣೆ
ಮಂಗಳೂರು : ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಕ್ಷೇತ್ರ ಮಾರ್ನಮಿಕಟ್ಟಾ ಮಂಗಳೂರು ಇಲ್ಲಿ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಶ್ರೀ ಕರಣ್ ಜ್ಯೋತಿಷಿ ಯವರು ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ ಹಲವು ಬಡ ಕುಟುಂಬಗಳಿಗೆ ಫುಡ್ ಕಿಟ್ ನ್ನು ( ಅಕ್ಕಿ ದವಸ ಧಾನ್ಯ, ತರಕಾರಿ ) ವಿತರಿಸಿರುತ್ತಾರೆ. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿರವರಿಗೆ ಇತ್ತೀಚಿಗೆ ನಗರದ ಸಿಎಆರ್ ಕಛೇರಿ ಅಂಗಣದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಒದಗಿಸಿಕೊಟ್ಟಿರುತ್ತಾರೆ. […]
ಕೋವಿಡ್’ನಿಂದ ಮೃತಪಟ್ಟ ಬಿಪಿಎಲ್ ಕಾರ್ಡುದಾರ ದುಡಿಯುವ ವ್ಯಕ್ತಿಯ ಕುಟುಂಬಕ್ಕೆ 1 ಲಕ್ಷ ಪರಿಹಾರ: ಸಿಎಂ ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಕೋವಿಡ್-19 ನಿಂದ ಕುಟುಂಬದ ದುಡಿಯುವ ವ್ಯಕ್ತಿ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವಾಗಿ ಸರ್ಕಾರ 250ರಿಂದ 300 ಕೋಟಿ ರೂಪಾಯಿ ಪ್ಯಾಕೇಜ್ ನೀಡಲಿದೆ. ದೇಶದಲ್ಲಿಯೇ ನಮ್ಮ ಸರ್ಕಾರ ಮೊದಲ ಬಾರಿಗೆ ಈ ಪರಿಹಾರ ಘೋಷಣೆ ಮಾಡುತ್ತಿದೆ ಎಂದರು. ಕೋವಿಡ್-19 ಸೋಂಕಿನಿಂದ ಮೃತಪಟ್ಟು […]
ಮಂಗಳಮುಖಿಯರಿಗೆ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಣೆ
ಮಂಗಳೂರು: ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 115 ಮಂಗಳಮುಖಿಯರಿಗೆ ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಿಸಲಾಯಿತು. ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಮತ್ತು ದಿನಬಳಕೆಯ ವಸ್ತುಗಳನ್ನು ಒಳಗೊಂಡ ಕಿಟ್ ಗಳನ್ನು ಸ್ವೀಕರಿಸಿದ ಮಂಗಳಮುಖಿಯರ ಪರವಾಗಿ ಮಾತನಾಡಿದ ಬಾಲಕೃಷ್ಣ ಅವರು ಟ್ರಸ್ಟಿನ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು. ಲಾಕ್ ಡೌನ್ ಅವಧಿಯಲ್ಲಿ ಬದುಕು ಸಾಗಿಸುವುದೇ ಸವಾಲಾಗಿತ್ತು. ಆದಾಯ ಇಲ್ಲದೆ ದಿನ ದೂಡುವುದು ಸಂಕಷ್ಟಮಯವಾಗಿತ್ತು. ಇಂತಹ ಸಮಯದಲ್ಲಿ ಮಾನವೀಯ ಹೃದಯವುಳ್ಳ […]